- + 7ಬಣ ್ಣಗಳು
- + 34ಚಿತ್ರಗಳು
- shorts
- ವೀಡಿಯೋಸ್
ಹುಂಡೈ ಕ್ರೆಟಾ
ಹುಂಡೈ ಕ್ರೆಟಾ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1482 cc - 1497 cc |
ground clearance | 190 mm |
ಪವರ್ | 113.18 - 157.57 ಬಿಹೆಚ್ ಪಿ |
torque | 143.8 Nm - 253 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಕ್ರುಯಸ್ ಕಂಟ್ರೋಲ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಸನ್ರೂಫ್
- ಡ್ರೈವ್ ಮೋಡ್‌ಗಳು
- powered ಮುಂಭಾಗ ಸೀಟುಗಳು
- ವೆಂಟಿಲೇಟೆಡ್ ಸೀಟ್‌ಗಳು
- 360 degree camera
- adas
- ರಿಯರ್ ಏಸಿ ವೆಂಟ್ಸ್
- ಪಾರ್ಕಿಂಗ್ ಸೆನ್ಸಾರ್‌ಗಳು
- advanced internet ಫೆಅತುರ್ಸ್
- key ವಿಶೇಷಣಗಳು
- top ವೈಶಿಷ್ಟ್ಯಗಳು
ಕ್ರೆಟಾ ಇತ್ತೀಚಿನ ಅಪ್ಡೇಟ್
ಹ್ಯುಂಡೈ ಕ್ರೆಟಾದ ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಹ್ಯುಂಡೈಯು 2024ರ ಹ್ಯುಂಡೈ ಕ್ರೆಟಾದ ನೈಟ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಕಾಂಪ್ಯಾಕ್ಟ್ ಎಸ್‌ಯುವಿಯ ಈ ಆವೃತ್ತಿಯು ಹೊರಗೆ ಸಂಪೂರ್ಣ ಕಪ್ಪು ಶೈಲಿಯ ಅಂಶಗಳನ್ನು ಮತ್ತು ಒಳಗೆ ಸಂಪೂರ್ಣ ಕಪ್ಪು ಇಂಟಿರಿಯರ್ ಥೀಮ್ ಅನ್ನು ಒಳಗೊಂಡಿದೆ.
ಹ್ಯುಂಡೈ ಕ್ರೆಟಾದ ಬೆಲೆ ಎಷ್ಟು?
2024ರ ಹ್ಯುಂಡೈ ಕ್ರೆಟಾದ ಬೇಸ್ ಪೆಟ್ರೋಲ್-ಮ್ಯಾನ್ಯುವಲ್ ಆವೃತ್ತಿಯು 11 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ ಮತ್ತು ಟಾಪ್-ಎಂಡ್ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್-ಆಟೋಮ್ಯಾಟಿಕ್ ಆವೃತ್ತಿಗಳ ಬೆಲೆಗಳು 20.15 ಲಕ್ಷ ರೂ.ವರೆಗೆ ಇರಲಿದೆ. ಹ್ಯುಂಡೈ ಕ್ರೆಟಾದ ನೈಟ್ ಎಡಿಷನ್‌ನ ಬೆಲೆ 14.51 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ.
ಹ್ಯುಂಡೈ ಕ್ರೆಟಾದಲ್ಲಿ ಎಷ್ಟು ಆವೃತ್ತಿಗಳಿವೆ ?
2024ರ ಹ್ಯುಂಡೈ ಕ್ರೆಟಾವನ್ನು E, EX, S, S(O), SX, SX Tech, ಮತ್ತು SX(O) ಎಂಬ ಏಳು ಆವೃತ್ತಿಗಳಲ್ಲಿ ನೀಡಲಾಗುತ್ತದೆ. ಹೊಸ ನೈಟ್ ಎಡಿಷನ್ ಮಿಡ್-ಸ್ಪೆಕ್ ಎಸ್(ಒಪ್ಶನಲ್) ಮತ್ತು ಟಾಪ್-ಸ್ಪೆಕ್ ಎಸ್‌ಎಕ್ಸ್(ಒಪ್ಶನಲ್) ಆವೃತ್ತಿಗಳನ್ನು ಆಧರಿಸಿದೆ.
ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ಆವೃತ್ತಿ ಯಾವುದು ?
ಎಸ್(O) ಆವೃತ್ತಿಯು ಫೀಚರ್‌ಗಳು ಮತ್ತು ಬೆಲೆಯ ನಡುವೆ ಉತ್ತಮ ಸಮತೋಲನವನ್ನು ನೀಡುತ್ತದೆ, ವಿಶೇಷವಾಗಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಆದ್ಯತೆ ನೀಡುವವರಿಗೆ. ಇದು ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆರು ಏರ್‌ಬ್ಯಾಗ್‌ಗಳು, 17-ಇಂಚಿನ ಅಲಾಯ್ ವೀಲ್‌ಗಳು ಮತ್ತು ಹೆಚ್ಚಿನದನ್ನು ಹೊಂದಿದೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳು ಸುಮಾರು 17 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ.
ಹ್ಯುಂಡೈ ಕ್ರೆಟಾ ಯಾವ ಫೀಚರ್ ಅನ್ನು ಪಡೆಯುತ್ತದೆ?
ಫೀಚರ್‌ನ ಕೊಡುಗೆಗಳು ವೇರಿಯೆಂಟ್‌ನ ಮೇಲೆ ಅವಲಂಬಿತವಾಗಿದೆ, ಇದರಲ್ಲಿರುವ ಪ್ರಮುಖ ಫೀಚರ್‌ಗಳೆಂದರೆ, H-ಆಕಾರದ ಎಲ್‌ಇಡಿ ಡೇಲೈಟ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು (ಡಿಆರ್‌ಎಲ್‌ಗಳು), ಕನೆಕ್ಟೆಡ್ ಎಲ್‌ಇಡಿ ಟೈಲ್ ಲೈಟ್‌ಗಳು, 10.25-ಇಂಚಿನ ಡ್ಯುಯಲ್ ಡಿಸ್ಪ್ಲೇಗಳು (ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗೆ ಮತ್ತು ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗೆ), ಕನೆಕ್ಟೆಡ್ ಕಾರ್ ಟೆಕ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ (ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಪ್ರತ್ಯೇಕ ತಾಪಮಾನ ಕಂಟ್ರೋಲ್‌ಗಳನ್ನು ನೀಡುತ್ತದೆ), 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್ [S(O)ನ ಮುಂದಿನವುಗಳಲ್ಲಿ], ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ [ SX Tech ಮತ್ತು SX(O)] ಮತ್ತು ಹೌದು, ಇದು ದೊಡ್ಡ ಪನರೋಮಿಕ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ [S(O) ನ ಮುಂದಿನವುಗಳಲ್ಲಿ].
ಇದು ಎಷ್ಟು ವಿಶಾಲವಾಗಿದೆ?
ಕ್ರೆಟಾದಲ್ಲಿ ಐದು ವಯಸ್ಕರಿಗೆ ಆರಾಮವಾಗಿ ಕುಳಿತುಕೊಳ್ಳಬಹುದು, ಹೆಚ್ಚಿನ ಪ್ರಯಾಣಿಕರುಗಳಿಗೆ ಸಾಕಷ್ಟು ಲೆಗ್‌ರೂಮ್ ಮತ್ತು ಹೆಡ್‌ರೂಮ್ ಇದೆ. ಆ ಹೆಚ್ಚುವರಿ ಸೌಕರ್ಯಕ್ಕಾಗಿ ಹಿಂದಿನ ಸೀಟುಗಳನ್ನು ಸಹ ಒರಗಿಸಬಹುದು. ಈಗ ಲಗೇಜ್ ಜಾಗದ ಬಗ್ಗೆ ಮಾತನಾಡೋಣ. 433 ಲೀಟರ್ ಸರಕು ಸ್ಥಳದೊಂದಿಗೆ, ಕ್ರೆಟಾ ನಿಮ್ಮ ದೈನಂದಿನ ಅಗತ್ಯತೆಗಳನ್ನು ಮತ್ತು ವಾರಾಂತ್ಯದ ಟ್ರಿಪ್‌ಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಆದರೆ, ಬೂಟ್ ಆಳವಾಗಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು, ಆದ್ದರಿಂದ ಒಂದೇ ದೊಡ್ಡದಾದ ಬದಲಿಗೆ ಅನೇಕ ಸಣ್ಣ ಟ್ರಾಲಿ ಬ್ಯಾಗ್‌ಗಳನ್ನು ಸಾಗಿಸಲು ಸುಲಭವಾಗುತ್ತದೆ. ಒಂದು ವೇಳೆ ನೀವು ಹೆಚ್ಚು ಲಗೇಜ್ ಕೊಂಡೊಯ್ಯಬೇಕಾದರೆ, ಹಿಂಭಾಗದ ಸೀಟನ್ನು 60:40 ಅನುಪಾತದಲ್ಲಿ ವಿಭಜಿಸಬಹುದು.
ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ನಿಮಗೆ ಮೂರು ಆಯ್ಕೆಗಳಿವೆ, ಪ್ರತಿಯೊಂದೂ ನಿಮ್ಮ ಚಾಲನಾ ಶೈಲಿ ಮತ್ತು ಅಗತ್ಯಗಳಿಗೆ ಸರಿಹೊಂದುವಂತೆ ನಿರ್ದಿಷ್ಟ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿದೆ:
-
1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್: ಈ ಎಂಜಿನ್ 115 ಪಿಎಸ್ ಮತ್ತು 144 ಎನ್‌ಎಮ್‌ನಷ್ಟು ಓಟ್‌ಪುಟ್ ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಸಿವಿಟಿ ಆಟೋಮ್ಯಾಟಿಕ್‌ಗೆ ಜೋಡಿಯಾಗಿ ಬರುತ್ತದೆ ಮತ್ತು ಸಾಂದರ್ಭಿಕ ಹೆದ್ದಾರಿ ಪ್ರಯಾಣಗಳೊಂದಿಗೆ ನಗರ ಪ್ರಯಾಣಕ್ಕೆ ಸೂಕ್ತವಾಗಿದೆ.
-
1.5-ಲೀಟರ್ ಟರ್ಬೊ-ಪೆಟ್ರೋಲ್: ನೀವು ವೇಗದ ಚಾಲನೆಯನ್ನು ಆನಂದಿಸುವ ಡ್ರೈವಿಂಗ್ ಉತ್ಸಾಹಿಯಾಗಿದ್ದರೆ, ಇದು ನಿಮಗಾಗಿರುವ ಎಂಜಿನ್ ಆಯ್ಕೆಯಾಗಿದೆ. ಈ ಎಂಜಿನ್ 160 ಪಿಎಸ್ ಅನ್ನು ಹೊರಹಾಕುತ್ತದೆ ಮತ್ತು 253 ಎನ್‌ಎಮ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ) ಯೊಂದಿಗೆ ಜೋಡಿಸಲಾಗಿದೆ, ಇದು ಸಿವಿಟಿ ಆಟೋಮ್ಯಾಟಿಕ್‌ಗಿಂತ ಉತ್ತಮವಾಗಿದೆ ಮತ್ತು ನಯವಾದ ಮತ್ತು ತ್ವರಿತ ಗೇರ್ ಬದಲಾವಣೆಗಳನ್ನು ಮಾಡುತ್ತದೆ. ಈ ಎಂಜಿನ್ ಚಾಲನೆ ಮಾಡಲು ಹೆಚ್ಚು ಮೋಜಿನದ್ದಾಗಿದ್ದರೂ, ಇದು ಹೆಚ್ಚು ಮೈಲೇಜ್‌ಅನ್ನು ಹೊಂದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
-
1.5-ಲೀಟರ್ ಡೀಸೆಲ್: ಡೀಸೆಲ್ ಎಂಜಿನ್ ಅನ್ನು ಅದರ ಪವರ್‌ನ ಸಮತೋಲನ ಮತ್ತು ಹೆದ್ದಾರಿಗಳಲ್ಲಿ ಸ್ವಲ್ಪ ಉತ್ತಮ ಇಂಧನ ದಕ್ಷತೆಗಾಗಿ ಆಲ್ ರೌಂಡರ್ ಎಂದು ಪರಿಗಣಿಸಲಾಗುತ್ತದೆ. ಕ್ರೆಟಾದೊಂದಿಗೆ, ಇದು 116 ಪಿಎಸ್ ಮತ್ತು 250 ಎನ್‌ಎಮ್ ನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ.
ಹ್ಯುಂಡೈ ಕ್ರೆಟಾದ ಮೈಲೇಜ್ ಎಷ್ಟು?
2024ರ ಕ್ರೆಟಾದ ಕ್ಲೈಮ್ ಮಾಡಲಾದ ಮೈಲೇಜ್ ನೀವು ಆಯ್ಕೆ ಮಾಡುವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಅನ್ನು ಅವಲಂಬಿಸಿ ಬದಲಾಗುತ್ತದೆ.
-
1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್: ಪ್ರತಿ ಲೀ.ಗೆ 17.4 ಕಿ.ಮೀ (ಮ್ಯಾನುಯಲ್), ಪ್ರತಿ ಲೀ.ಗೆ 17.7 ಕಿ.ಮೀ.(ಸಿವಿಟಿ)
-
1.5-ಲೀಟರ್ ಟರ್ಬೊ-ಪೆಟ್ರೋಲ್: ಪ್ರತಿ ಲೀ.ಗೆ 18.4 ಕಿ.ಮೀ.
-
1.5-ಲೀಟರ್ ಡೀಸೆಲ್: ಪ್ರತಿ ಲೀ.ಗೆ 21.8 ಕಿ.ಮೀ. (ಮ್ಯಾನುಯಲ್), ಪ್ರತಿ ಲೀ.ಗೆ 19.1 ಕಿ.ಮೀ. (ಆಟೋಮ್ಯಾಟಿಕ್)
ಹ್ಯುಂಡೈ ಕ್ರೆಟಾ ಎಷ್ಟು ಸುರಕ್ಷಿತ?
ಸುರಕ್ಷತಾ ಪ್ಯಾಕೇಜ್‌ಗಳು ವೇರಿಯೆಂಟ್‌ನಿಂದ ವೇರಿಯೆಂಟ್‌ಗೆ ಬದಲಾಗುತ್ತವೆ, ಆದರೆ ಎಲ್ಲಾ ವೇರಿಯೆಂಟ್‌ಗಳು 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿವೆ. ಟಾಪ್ ವೇರಿಯೆಂಟ್‌ಗಳು ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಸುರಕ್ಷತಾ ಸೂಟ್ ಅನ್ನು ಸಹ ನೀಡುತ್ತವೆ, ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ, ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮುಂತಾದ ಫೀಚರ್‌ಗಳು ಸೇರಿವೆ. ಆದರೆ, ಕ್ರೆಟಾವನ್ನು ಭಾರತ್ NCAP ನಿಂದ ಇನ್ನೂ ಕ್ರ್ಯಾಶ್ ಪರೀಕ್ಷೆ ಮಾಡಲಾಗಿಲ್ಲ, ಆದ್ದರಿಂದ ಸುರಕ್ಷತೆಯ ರೇಟಿಂಗ್‌ಗಳು ಇನ್ನೂ ಕಾಯುತ್ತಿವೆ. ಗ್ಲೋಬಲ್ ಎನ್‌ಸಿಎಪಿಯಲ್ಲಿ ವೆರ್ನಾ ಪೂರ್ಣ ಐದು ಸ್ಟಾರ್‌ಗಳನ್ನು ಗಳಿಸಿರುವುದರಿಂದ, ಆಪ್‌ಡೇಟ್ ಮಾಡಲಾದ ಕ್ರೆಟಾದಲ್ಲಿ ನಾವು ಹೆಚ್ಚಿನ ಭರವಸೆಯನ್ನು ಹೊಂದಿದ್ದೇವೆ.
ಹ್ಯುಂಡೈ ಕ್ರೆಟಾದಲ್ಲಿ ಯಾವ ಬಣ್ಣಗಳ ಆಯ್ಕೆಗಳು ಲಭ್ಯವಿದೆ?
ಕ್ರೆಟಾ ಆರು ಮೊನೊಟೋನ್ ಬಣ್ಣಗಳಲ್ಲಿ ಮತ್ತು ಒಂದು ಡ್ಯುಯಲ್-ಟೋನ್ ಶೇಡ್‌ನಲ್ಲಿ ಬರುತ್ತದೆ. ಅವುಗಳೆಂದರೆ: ರೊಬಸ್ಟ್ ಎಮರಾಲ್ಡ್ ಪರ್ಲ್, ಫಿಯರಿ ರೆಡ್, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಟೈಟಾನ್ ಗ್ರೇ, ಅಟ್ಲಾಸ್ ವೈಟ್ ಮತ್ತು ಕಪ್ಪು ರೂಫ್‌ನೊಂದಿಗೆ ಅಟ್ಲಾಸ್ ವೈಟ್. ಮತ್ತೊಂದೆಡೆ, ಕ್ರೆಟಾ ನೈಟ್ ಎಡಿಷನ್ ಆರು ಮೊನೊಟೋನ್ ಮತ್ತು ಎರಡು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿದೆ: ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ, ರೋಬಸ್ಟ್ ಎಮರಾಲ್ಡ್ ಪರ್ಲ್, ಸ್ಟಾರಿ ನೈಟ್, ಟೈಟಾನ್ ಗ್ರೇ ಮ್ಯಾಟ್, ಅಟ್ಲಾಸ್ ವೈಟ್ ವಿಥ್ ಬ್ಲ್ಯಾಕ್ ರೂಫ್ ಮತ್ತು ಶಾಡೋ ಗ್ರೇ ಬ್ಲ್ಯಾಕ್ ರೂಫ್‌ನೊಂದಿಗೆ ಬರುತ್ತದೆ. ನಾವು ವಿಶೇಷವಾಗಿ ಇಷ್ಟಪಟ್ಟದ್ದು: ನೀವು ಎದ್ದು ಕಾಣಲು ಬಯಸಿದರೆ ಫಿಯರಿ ರೆಡ್, ಮತ್ತು ನೀವು ತೀಕ್ಷ್ಣವಾದ, ಅತ್ಯಾಧುನಿಕ ನೋಟವನ್ನು ಬಯಸಿದರೆ ಅಬಿಸ್ ಬ್ಲ್ಯಾಕ್ ಉತ್ತಮ ಆಯ್ಕೆಯಾಗಿದೆ.
ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ ಯಾವ ಬದಲಾವಣೆಗಳನ್ನು ಪಡೆಯುತ್ತದೆ?
ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ ಕಾಸ್ಮೆಟಿಕ್ ಟ್ವೀಕ್‌ಗಳನ್ನು ಹೊಂದಿದ್ದು ಅದು ಸ್ಪೋರ್ಟಿಯರ್ ನೋಟವನ್ನು ನೀಡುತ್ತದೆ. ಇದು ಬ್ಲ್ಯಾಕ್ ಔಟ್ ಗ್ರಿಲ್, ಅಲಾಯ್‌ಗಳು ಮತ್ತು ಬ್ಯಾಡ್ಜಿಂಗ್ ಅನ್ನು ಒಳಗೊಂಡಿದೆ. ಇದು ಸ್ಪೇಷಲ್ ಎಡಿಷನ್ ಎಂದು ಸೂಚಿಸಲು "ನೈಟ್ ಎಡಿಷನ್" ಬ್ಯಾಡ್ಜ್ ಅನ್ನು ಸಹ ಪಡೆಯುತ್ತದೆ. ಒಳಭಾಗದಲ್ಲಿ, ಕ್ಯಾಬಿನ್ ವ್ಯತಿರಿಕ್ತ ಹಿತ್ತಾಳೆಯ ಬಣ್ಣದ ಇನ್ಸರ್ಟ್ಸ್‌ನೊಂದಿಗೆ ಸಂಪೂರ್ಣ ಕಪ್ಪು ಬಣ್ಣವನ್ನು ಪಡೆಯುತ್ತದೆ. ಕ್ರೆಟಾ ನೈಟ್ ಎಡಿಷನ್‌ನ ಫೀಚರ್‌ಗಳ ಪಟ್ಟಿ ಮತ್ತು ಎಂಜಿನ್ ಆಯ್ಕೆಗಳು ಎಲ್ಲಾ ಆವೃತ್ತಿಗಳಿಗೆ ಒಂದೇ ಆಗಿರುತ್ತವೆ.
ಕ್ರೆಟಾ ಇ(ಬೇಸ್ ಮಾಡೆಲ್)1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್2 months waiting | Rs.11.11 ಲಕ್ಷ* | ||
ಕ್ರೆಟಾ ಇಎಕ್ಸ್1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್2 months waiting | Rs.12.32 ಲಕ್ಷ* | ||